Writers Community

ಯೋಧರಿಗೆ ಒಂದು ಸಲಾಂ..!

9.15Kviews

ಕೋರೊನಾ ಯೋಧರು
ಜಗತ್ತನ್ನೇ ಬೆಚಿಬೀಳಿಸುತ್ತಿರುವ ಕೋರೊನಾ ವೈರಸ್ ಎಂಬ ಮಾರಕ ವೈರಸ್ ಚೀನಾದ ವೂಹಾನ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದು ಶೀಘ್ರವಾಗಿ ಎಲ್ಲೆಡೆ ಪ್ರಸರಿಸುತ್ತದೆ. ಈ ವೈರಸ್ ಉಸಿರಾಟದ ಗಾಳಿಯ ಮೂಲಕ ಅಥವಾ ಸೊಂಕಿತ ವ್ಯಕ್ತಿಯನ್ನು ಮುಟ್ಟುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 2019 ರ ಡಿಸೆಂಬರ್ 31ರಂದು ಈ ರೋಗದ ವೈರಾಣು ಪತ್ತೆಯಾಗಿತ್ತು.

ಮುಟ್ಟಿದರೆ ಮುನಿ ಎಂಬ ಹೇಳಿಕೆಯಂತೆ ಕೋರೊನಾ ಶಂಕಿತರ’ನ್ನು ಮುಟ್ಟಿದರೆ ಸಾಕು ಕೊರೋನಾ ಹರಡುತ್ತದೆ.
ಈ ವೈರಾಣು ಚಿಕ್ಕಮಕ್ಕಳಿಗೆ ಮತ್ತು ವೃದ್ಧರಿಗೆ ತುಂಬಾ ವೇಗವಾಗಿ ಹರಡುತ್ತದೆ. ಮನೆಗೆ ಅತಿಥಿಗಳು ಬಂದರೂ ಕೂಡ ಅವರನ್ನು ಪರೀಕ್ಷಿಸಿ ಒಳಗೆ ಕರೆದುಕೊಳ್ಳುವ ಪರಿಸ್ಥಿತಿ ಬಂದಿದೆ ಮನೆಗೆ ಆಗಮಿಸುತ್ತಿರುವದಾದರೆ ನಾವೇ ನಮ್ಮ ಬಾಯಿಂದ ನೀವು ಬರುವುದು ಬೇಡ. ನಾವು ನಿಮ್ಮ ಕಡೆ ಬರುವುದು ಬೇಡ ಇಬ್ಬರು ಕ್ಷೇಮವಾಗಿರೋಣ ಎನ್ನುವ ಪರಿಸ್ಥಿತಿ ಬಂದಿದೆ.

ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ಕೋರೊನಾ ವಿರುದ್ಧ ಒಂದಿಷ್ಟು ಇಲಾಖೆಗಳು ಹೋರಾಡಿವೆ.

*ಆರೋಗ್ಯ ಇಲಾಖೆ (ವೈದ್ಯರು, ನರ್ಸ್ ಗಳು)
*ಪೊಲೀಸ್ ಇಲಾಖೆ
*ಯೋಧರು
*ಕಂದಾಯ ಇಲಾಖೆ
ದೇಶ ರಕ್ಷಣೆ ಮಾಡುವಲ್ಲಿ ಯಾರು ಕೋರೊನಾದ ವಿರುದ್ಧ ಹೋರಾಡುತ್ತಿದ್ದಾರೆ? ಯಾರು ಕೊರೋನಾ ಯೋಧರು?
ಹಿಂದಿನ ಪುಟದಲ್ಲಿ ನೋಡಿದ ಹಾಗೆ ಆ ನಾಲ್ಕು ಇಲಾಖೆಯವರು ಕೂಡ ಕರುನಾದ ವಿರುದ್ಧ ಹೋರಾಡಿದ್ದಾರೆ ಆ ನಾಲ್ಕು ಇಲಾಖೆ ಅವರಲ್ಲಿ ಒಂದು ಇಲಾಖೆ ದವರು ಕೆಲಸ ಮಾಡದೆ ಹಾಗೆ ಉಳಿದಿದ್ದರೆ ಕೋರೋನಾ ನಿಯಂತ್ರಿಸುವಲ್ಲಿ ದೊಡ್ಡ ತೊಂದರೆ ಆಗುತ್ತಿತ್ತು. ಎಲ್ಲರೂ ನನ್ನ ಪ್ರಕಾರ ತಮ್ಮ ಜೀವವನ್ನು ಲೆಕ್ಕಿಸದೆ ತಮ್ಮ ಕುಟುಂಬವನ್ನು ದೂರ ಮಾಡಿ ಸದಾ ರೋಗಿಗಳು ಚಿಕಿತ್ಸೆಗೆ ನಿಂತ ಆರೋಗ್ಯ ಇಲಾಖೆಯನ್ನು ಮೆಚ್ಚಲೇಬೇಕು. ನರ್ಸುಗಳು ಸಹಿತ ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ತೊರೆದು ಕೆಲಸದಲ್ಲಿ ನಿರತರಾಗಿ ಮಕ್ಕಳಿಂದ 30 ದಿನಗಳವರೆಗೆ ದೂರವಿದ್ದು ಪರದಾಡಿದ ದೃಶ್ಯಗಳನ್ನು ನಾವು ದೂರದರ್ಶನದಲ್ಲಿ ನೋಡಿದ್ದೇವೆ.

ಚೀನಾ ಮತ್ತು ಇಟಲಿ ಅಂತೂ ಕೋರೋನಾ ವ್ಯಾಪಕವಾಗಿ ಹರಡಿ ಕೋರೋನಾ ರೋಗಿಗಳು ಗುಣಮುಖರಾಗದೆ ಹೆಣವನ್ನು ಸಾಮೂಹಿಕವಾಗಿ ಹೂತಿದ್ದಾರೆ. ರೋಗಿಗಳನ್ನು ಹಾಕಲು ಕೂಡ ಸ್ಥಳವಿಲ್ಲದೆ ಒದ್ದಾಡಿದ ಪ್ರಸಂಗವು ಕಂಡಿದ್ದೇವೆ. ಇಂತಹ ಕಠಿಣ ಪರಿಸ್ಥಿತಿಯನ್ನು ನಿರ್ವಹಿಸಿದ ವೈದ್ಯರ ತಂಡಕ್ಕೆ ನನ್ನ ಕಡೆಯಿಂದ ಸಲಾಂ..! ತಮ್ಮ ಕುಟುಂಬ ದಿನನಿತ್ಯ ಜೀವನವನ್ನು ಮರೆತು ತಮ್ಮ ವೈದ್ಯವೃತಿಯಲ್ಲಿ ತಲ್ಲೀನರಾಗಿದ್ದರು ಆರೋಗ್ಯ ಇಲಾಖೆಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು.
*ವೈದ್ಯ ಇಲಾಖೆಗೆ ಒಂದು ಸಲಾಂ*

ಪೊಲೀಸ್ ಇಲಾಖೆ
ಆರೋಗ್ಯ ಇಲಾಖೆಯವರು ಆಸ್ಪತ್ರೆಯ ಒಳಗಡೆ ನಿಂತು ಸೇವೆ ಸಲ್ಲಿಸಿದರೆ ಕಾರ್ಯ ನಿರ್ವಹಿಸಿದರೆ ಮತ್ತೊಂದು ಕಡೆ ಈ ಪೊಲೀಸ್ ಇಲಾಖೆ ಬಿಸಿಲು ನೆರಳನ್ನೇ ಹಗಲು-ರಾತ್ರಿಯೆನ್ನದೆ ತಮ್ಮ ಕಾರ್ಯ ನಿರ್ವಹಿಸಿ ಕೊರೋನಾ ಯೋಧರನಿಸಿಕೊಂಡಿದ್ದಾರೆ. ಇವರು ಕೂಡ ತಮ್ಮ ಮನೆಯನ್ನು ಮರೆತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತಿನಂತೆ ದೇಶದ ರಕ್ಷಣೆಯಲ್ಲಿ ಕೈಜೋಡಿಸಿದರು ಆದಂತಹ ಪ್ರದೇಶಗಳಲ್ಲಂತೂ. ಪೊಲೀಸ್ ಸಿಬ್ಬಂದಿ ಕಣ್ಣಿಗೆ ನಿದ್ದೆ ಇಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಸದಾ ನಾಲ್ಕರಿಂದ ಐದು ಜನ ಪೊಲೀಸರು ನಿಂತು ಪಾಸ್ಗಳನ್ನು ಚೆಕ್ ಮಾಡಿ. ಮಕ್ಕಳನ್ನು ಧರಿಸುವಂತೆ ಎಚ್ಚರಿಸಿ ಕಳುಹಿಸುತ್ತಿದ್ದರು. ಸುಮ್ಮನೆ ಒಂದಿಷ್ಟು ಜನ ಮನಸ್ಸಿಗೆ ಬಂದ ಹಾಗೆ ಹೊಡೆಯುತ್ತಾರೆ ಎಂದು ಅವಹೇಳನದ ಮಾತುಗಳನ್ನು ಆಡುತ್ತಿದ್ದರು ಆದರೆ ಒಂದು ಸಲ ಯೋಚಿಸಿ.
ಅವರು ಕೂಡ ಕೊರೋನಾಗೆ ಹೆದರಿ ಅವರು ಮನೆಯಲ್ಲೇ ಕುಳಿತಿದ್ದರೆ ಲಾಕ್ ಡೌನ್ ಸರಿಯಾಗಿ ನಡೆಯುತ್ತಲೇ ಇರಲಿಲ್ಲ. ಕೋರೋನಾ‌ ಇನ್ನೂ ಹೆಚ್ಚಳವಾಗುತ್ತಿತು. ಇಷ್ಟು ಬಿಗಿಭದ್ರತೆ ಮಾಡಿ ಮೂಲೆಮೂಲೆಗೆ ಪೊಲೀಸರು ಕಾವಲಿಗೆ ನಿಂತರೂ ಕೂಡ ಎಷ್ಟೋ ಜನ ಬೈಕ್ ತೆಗೆದುಕೊಂಡು ಖಾಲಿ ಕೆಲಸವಿಲ್ಲದೆ ಸುತ್ತಾಡುತ್ತಿದ್ದರು. ಇವರಿಗೆ ಪೊಲೀಸರು ಲಾಠಿ ಏಟು ಕೊಟ್ಟು ಪಾಠ ಕಲಿಸಿದರು ಹೀಗಾಗಿ ಕರೋನಾ ಯೋಧರಲ್ಲಿ ಇವರ ತ್ಯಾಗ ಕಾರ್ಯ ನಿರ್ವಹಣೆ ಅಪಾರವಾಗಿದೆ.

ಪೊಲೀಸ್ ಇಲಾಖೆಗೆ ನನ್ನ ಸಲಾಂ…!!!

ಯೋಧರು:
ಸತತವಾಗಿ ವರ್ಷದ 12 ತಿಂಗಳು ದೇಶವನ್ನು ರಕ್ಷಿಸುವಲ್ಲಿ ಇವರು ನಿಜವಾದ ಯೋಧರು. ಕೊರೋನಾ ಬಂದಾಗಲೂ ಕೂಡ ಪೊಲೀಸರಿಗೆ ಕೈಮೀರಿ ಹೋದಾಗ ಯೋಧರನ್ನು ಎಲ್ಲಾ ಪ್ರದೇಶಗಳಲ್ಲಿ ನೇಮಿಸಲಾಗಿತ್ತು. ಪೊಲೀಸರ ಜೊತೆಗೆ ಇವರು ಸೇರಿ ಜನತೆಯನ್ನು ರಕ್ಷಿಸುವಲ್ಲಿ ಕೊರೋನಾದ ವಿರುದ್ಧ ಹೋರಾಡುವಲ್ಲಿ ಕೈಜೋಡಿಸಿದರು.
ಇವರಿಗೆ ಎಷ್ಟು ‌ ಕೈಮುಗಿದರು ಸಾಕಾಗದು ವರ್ಷದ 12 ತಿಂಗಳು ಇವರು ಕುಟುಂಬವನ್ನು ತೊರೆದು ದೇಶದ ರಕ್ಷಣೆ ಮಾಡುವಲ್ಲಿ ತಲ್ಲೀನರಾಗಿರುತ್ತಾರೆ. ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಎಷ್ಟು ಜನ ಯೋಧರು ತಮ್ಮ ಜೀವವನ್ನು ಕಳೆದುಕೊಂಡಿದ್ದು ನಾವು ನೋಡಿದ್ದೇವೆ.
ನಾವು ಏನೇ ಕೆಲಸ ಮಾಡುತ್ತಿದ್ದರು ಕೂಡ ನಮ್ಮ ಜೀವಕ್ಕೆ ಅಪಾಯ ವಿದ್ದರೆ ಆ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ ಅಂತಹದರಲ್ಲಿ ಅವರು ತಮ್ಮ ಜೀವನವನ್ನೇ ಲೆಕ್ಕಿಸದೆ ಈ ಕೆಲಸಕ್ಕೆ ಸೇರಿರುತ್ತಾರೆ. ಈ ಕೆಲಸಕ್ಕೆ ತುಂಬಾ ಮುಖ್ಯವಾಗಿ ಬೇಕಾಗಿರುವುದು ಧೈರ್ಯ.

ಯೋಧರಿಗೆ ಒಂದು ಸಲಾಂ..!

ಇನ್ನು ಈ ಕಂದಾಯ ಇಲಾಖೆಯವರು ಕೂಡ ತಮ್ಮ ಕೆಲಸವನ್ನು ನಿಲ್ಲಿಸಿರಲಿಲ್ಲ ಕಂದಾಯ ಇಲಾಖೆಯಲ್ಲಿನ ಒಂದಿಷ್ಟು ಕೆಲಸಗಾರರನ್ನು ಪೋಲೀಸರ ಜೊತೆ ಕೆಲಸಮಾಡಲು ಹೇಳಿದ್ದು ಒಂದಿಷ್ಟು ಚೆಕ್ಪೋಸ್ಟ್ ಗಳಲ್ಲಿ ಪೊಲೀಸರ ಜೊತೆ ಕಂದಾಯ ಇಲಾಖೆಯವರು ಹಗಲು-ರಾತ್ರಿ ಕೆಲಸ ಮಾಡಿದ್ದಾರೆ ಆದರೆ ಇದು ಎಷ್ಟು ಜನಕ್ಕೆ ಗೊತ್ತಿಲ್ಲ ಇವರು ಕಣ್ಣಿಗೆ ಕಾಣದ ಕೊರೋನ ಯೋಧ ರಾಗಿದ್ದಾರೆ. ಇವರಿಗೂ ಕೂಡ ಒಂದು ಸಲಾಂ..!

ಇವರಲ್ಲಿ ಕೊರೋನಾ ಯೋಧರಲ್ಲಿ ಅವರು ಹೆಚ್ಚು ಇವರು ಹೆಚ್ಚು ಎನ್ನುವಂತಿಲ್ಲ ಯಾಕೆಂದರೆ ಇದರಲ್ಲಿ ಎಲ್ಲರ ತ್ಯಾಗವಿದೆ ಎಲ್ಲರೂ ಕೂಡ ಕೊರೋನಾದ ವಿರುದ್ಧ ಹೋರಾಡಿ ಕೋರೋನಾ ಯೋಧರನಿಸಿಕೊಂಡಿದ್ದಾರೆ.
ಇವರಲ್ಲಿ ಒಬ್ಬರು ಕೂಡ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮನೆಯಲ್ಲಿ ಕುಳಿತಿದ್ದರೆ ಕೊರೋನಾದ ವಿರುದ್ಧ ಹೋರಾಡಲು ಕಷ್ಟವಾಗುತ್ತಿತ್ತು. ಆದರೂ ಕೋರೋನಾ ರೋಗಿಯ ಪಕ್ಕ ನಿಂತು ಅವರನ್ನು ಗುಣಮುಖ ಮಾಡುತ್ತಿರುವ ವೈದ್ಯ ತಂಡಕ್ಕೆ ನನ್ನದೊಂದು ಮೆಚ್ಚುಗೆ.

*ಕೊನೆಯದಾಗಿ ಎಲ್ಲಾ ಕೋರೋನಾ ಯೋಧರಿಗೆ ನನ್ನ ಮೆಚ್ಚುಗೆ ಸಲಾಂ…!*

Written by : Manjula Doddamani

Spread the love
);