Writers Community

ಜೀವಧಾತರು!

1.19Kviews

ಯೋಧ ಎಂಬ ಪದವನ್ನು ಕೇಳಿದರೆ ನಮಗೆ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ನೆನಪಾಗುತ್ತರೆ. ಆದರೆ ಪರಿಸರ ಬದಾಲವಣೆಯಿಂದ ಉಂಟಾದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾಪಾಡುವಂತವರಿಗೆ ಯೋಧರು ಎಂದು ಹೇಳುಬಹುದು. ಉದಾಹರಣೆಗೆ – ಡಾಕ್ಟರ್, ನಸ್೯, ಪೋಲಿಸ್, ಪೌರಕಮಿ೯ಕರು, ಚಿಂದಿ ಆಯುವವರು.

ವಿಶ್ವದಲ್ಲಿಯೇ ಕೊರೊನಾಯೆಂಬ ಮಾಹಾಮಾರಿಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಇದು ಹಲವು ಜನರ ಸಾವಿಗೆ ಕಾರಣವಾಗಿದೆ. ಎಲ್ಲೆಡೆ ಕೊರೊನಾ ಭೀತಿ  ಭೀಕರವಾಗಿದ್ದು, ಅದರೆ ಜನರು ಅದನ್ನು ಲೆಕ್ಕಿಸದೆ ಎಲ್ಲೆಡೆ ಹೋಡಾಡಿ ಕೊರೊನ ಸೋಂಕಿತರ ಸಂಖ್ಯೆ ಯನ್ನು ಹೆಚ್ಚುಸುತ್ತಿದ್ದಾರೆ. ಇದನ್ನು ತಡೆಗಟ್ಟಲು ತಮ್ಮ ಪ್ರಾಣವನ್ನೇ  ಪಣಕ್ಕಿಟ್ಟು ಹೋರಾಡುತ್ತಿರುವ ಡಾಕ್ಟರ್, ನಸ್೯, ಪೋಲಿಸ್, ಪೌರಕಮಿ೯ಕರು, ಚಿಂದಿ ಆಯುವವರಿಗೊಂದು ಸಲಾಂ!

ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದ ನಮ್ಮ ಮನೆಯಲ್ಲೇ ಇದ್ದು ನಾವು ನಮ್ಮ ದೇಶವನ್ನು ರಕ್ಷಿಸುವ ಪರಿಸ್ಥಿತಿ ಬಂದಿದೆ. ಆದರೆ ನಮ್ಮಗಾಗಿ ಕಾಯುತ್ತಿರುವ ಪೋಲಿಸರು ಹಗಲು-ರಾತ್ರಿನೂ ಲೆಕ್ಕಿಸದೇ ನಮ್ಮನ್ನು ಕಾಪಾಡುತ್ತಿದ್ದರೆ. ಅವರು ತಮ್ಮ ಕುಟುಂಬದವರೊಂದಿಗೆ ಸಂತೋಷದಿಂದ ಇರದೇ ನಮ್ಮನ್ನು ರಕ್ಷಿಸುತ್ತಿದ್ದರೆ. ಇತ್ತ ಇನ್ನೊಂದೆಡೆ  ಸಾವಜನಿಕರು  ಸರ್ಕಾರದ ನಿಯಮಗಳನ್ನು ನಿಲ೯ಕ್ಷಿಸಿ ಹೋಡಾಡಿ ಪೋಲಿಸ್ರವರಿಗೆ ತೊಂದರೆ ಕೊಡುತ್ತಿದ್ದಾರೆ…..


ಕೊರೊನಾ ಎಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ನಾವು ನಮ್ಮ ಪ್ರಾಣ ಕಳೆದುಕೊಳ್ಳುವ  ಸಂದಭ೯ದಲ್ಲಿ ತಮ್ಮ ಕುಟುಂಬದವರಂತೆ ಭಾವಿಸಿ ನಮಗೆ ಚಿಕಿತ್ಸೆ ಮತ್ತು ಧೈಯ೯ ನೀಡುವವರೇ ಡಾಕ್ಟರ್ಗಳು. ಎಷ್ಟೇ ಸೋಂಕಿತರು ಬಂದರೂ ಛಲಗೆಡದೆ ಎಲ್ಲರನ್ನು ಒಂದೇ ಎಂದು ಭಾವಿಸಿ ಚಿಕಿತ್ಸೆ ನೀಡುತ್ತಿದ್ದರೆ.ಡಾಕ್ಟರ್ಗಳು ತಮ್ಮ ಕುಟುಂಬದವರಿಂದ ದೂರವಿದ್ದು , ನಮಗೋಸ್ಕರ ದುಡಿಯುತ್ತಿದ್ದಾರೆ.  ಆದ್ದರಿಂದ ಅವರನ್ನು ನಮ್ಮ ದೇವರು ಎಂದು ಹೇಳಬಹುದು.

 

ನಮ್ಮ ವೈದ್ಯರ ಸಹಾಯಕ್ಕಾಗಿ ಕೈಜೋಡಿಸಿದವರು ನಮ್ಮ ನಸ್೯ಗಳು ಹಾಗೂ ಆಶ ಕಾಯ೯ಕರತರು. ಅವರೂ ಸಹ ಪ್ರತಿದಿನ ಮನೆ ಮನೆ ಹೋಗಿ ಆರೋಗ್ಯ ತಪಾಸಾಣೆ ನಡೆಸುತ್ತಾರೆ ಹಾಗೂ ಅವರು ಜನರಿಗೆ ಕೊರೊನಾ ವಿರುದ್ಧದ ಜಾಗೃತಿ ಮೂಡಿಸುತ್ತಾರೆ. ರೋಗಿಗಳಿಗೆ ಹಾಗೂ ವೈದ್ಯರಿಗೆ ತುಂಬಾ ಹತ್ತಿರವಿದ್ದು,ತಮ್ಮ ಕುಟುಂಬದವರಂತೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ  ನೀಡುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಬೇರೆಯವರ ಆರೋಗ್ಯವನ್ನು ಕಾಪಾಡುವವರು ನಮ್ಮ ನಸ್೯ಗಳು. ಇವರು ಸಮುದಾಯಕ್ಕೆ ತಪಾಸಾಣೆಗೆಂದು  ಹೋದಾಗ ಅವರ ಮೇಲೆ ದೌಜನ್ಯ ನಡೆಸುತ್ತಿದ್ದಾರೆ. ನಮಗೊಸ್ಕರ ಕೆಲಸ ಮಾಡುತ್ತಿರುವ ನಸ್೯ಗಳ ಮೇಲೆ ನಡೆಯುತ್ತಿರುವುದು ಈ ಕಾರ್ಯ ತುಂಬಾ ಹೀನ ಕೃತ್ಯ. ಸಕಾ೯ರ ಇಂತ ಕೀಡಿಗೆಡಿಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು.

ನಾವು ಕೊರೊನಾ ಯೋಧರು ಎಂದು ಹೇಳಿದಾಗ ನಮಗೆ ಕಲ್ಪನೆಗೆ ಬರುವುದು ಡಾಕ್ಟರ್, ನಸ್೯, ಪೋಲಿಸ್ರು ಮಾತ್ರ. ಆದರೆ ಪರೋಕ್ಷವಾಗಿ ಕತ೯ವ್ಯವನ್ನು ನಿಭಾಯಿಸುತ್ತಿರುವ ನಮ್ಮ ಪೌರಕಮಿ೯ಕರು ಹಾಗೂ ಚಿಂದಿ ಆಯುವವರು ಸಹ ಕೋರೊನ ಯೋಧರೇ. ಇವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸದಾ ದುಡುಮೆಯಲ್ಲಿ ತೊಡಗಿರುತ್ತಾರೆ. ಇವರು ದಿನದ ದುಡುಮೆಯನ್ನೇ ನಂಬಿ ಬದುಕುವವರು.  ಚಿಂದಿ ಆಯುವವರು ತಮ್ಮ ಕೆಲಸದ ಮೂಲಕ ನಮ್ಮನ್ನು ಕಾಯುತ್ತಿದ್ದಾರೆ . ಅವರು ನಾವು ಸುರಕ್ಷಿತವಾಗಿರಲು ಮನೆಯ ಬಳಿಗೆ ಬಂದು ಪ್ಲಾಸ್ಟಿಕ್, ಪೇಪರ್ ಹಾಗೂ ಮುಂತಾದವುಗಳನ್ನುಆಯಿದು, ಇದರಿಂದ ನಮ್ಮನ್ನ  ಈ ರೋಗದ ವಿರುದ್ಧ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಕೊರೊನಾ ವಿರುದ್ದದ ಹೋರಾಟದಲ್ಲಿ ಇವರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಸ್ವಚ್ಚತೆಯ ಮಂತ್ರ ಪಠಿಸುತ್ತಾ, ಚಿಕಿತ್ಸೆಯೆಂಬ ಅಸ್ತ್ರವನ್ನಿಟ್ಟುಕೊಂಡು ಈ ಯೋಧರೆಲ್ಲಾ  ನಮಗಾಗಿ ದಿನನಿತ್ಯ  ಕಾಣದ ಶತ್ರುವಿನೊಡನೆ ಹೋರಾಟ ನಡೆಸುತ್ತೀದ್ದಾರೆ. ಅವರಿಗೊಂದು ಸಲಾಂ ಹೇಳಲೇ ಬೇಕು.

ಒಟ್ಟಾರೆಯಾಗಿ ನಮ್ಮ ದೇಶದ ಇಂದಿನ ಸುರಕ್ಷತೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ನಾವೆಲ್ಲಾ ಒಗ್ಗಟ್ಟಾಗಿ ಕೊರೊನಾ ಎಂಬ ಮಹಾಮಾರಿಯ ವಿರುದ್ದ ಹೋರಾಡಬೇಕಿದೆ. ಮುಂದಿನ ಪೀಳಿಯ ಅಗತ್ಯತೆ ಮತ್ತು ಇಂದಿನ  ಪೀಳಿಗೆ ಭವಿಷ್ಯವೂ ಈ ನಮ್ಮ ಹೋರಾಟವನ್ನೇ ಅವಲಂಭಿಸಿದೆ. ಜಾತಿ, ಮತ, ಪಂಥಗಳೆಲ್ಲವನ್ನು ಮರೆತು ಮನುಷ್ಯ ಕುಲದ ಊಳಿವಿಗಾಗಿ ಹೋರಾಡಬೇಕಿದೆ. ಒಗ್ಗಟ್ಟಿನಿಂದ ಮಾತ್ರ ಈ ಹೋರಾಟದಲ್ಲಿ ನಾವು ಗೆಲ್ಲಬಹುದು.

   

ಪ್ರಜ್ವಲ್.ಎಸ್.‌

 ಬುಗುರಿ ಗ್ರಂಥಾಲಯ, ಮೈಸೂರು

Spread the love
);